ವಿಕಾಸ್ ಗೌಡರವರು ಒಲಂಪಿಕ್_ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿರುವ ಖ್ಯಾತ ಕ್ರೀಡಾ ಪಟು. == ಜೀವನ ವಿವರ == ಕರ್ನಾಟಕದ ಅಥ್ಲೀಟ್‌ ವಿಕಾಸ್ ಗೌಡ (ಜನನ: 5 ಜುಲೈ 1993) ಇವರು ಮೈಸೂರಿನಲ್ಲಿ ಜನಿಸಿದ್ದು ಅಮೇರಿಕಾ ಸಂಯುಕ್ತ ಸಂಸ್ಥಾನದ ಮೇರಿ ಲ್ಯಾಂಡ್ ನಲ್ಲಿ ಬೆಳೆದರು. ಅವರ ತಂದೆ ಶಿವೆ ಗೌಡರು ಚಲನ-ಪಥದ ಓಟದಲ್ಲಿ ಅಭ್ಯಾಸಿಗಳಿಗೆ ಮಾರ್ಗದರ್ಶಕ/ಶಿಕ್ಷಕರಾಗಿದ್ದರು. ಇವರು ಭಾರತದ ಷಾಟ್`ಪುಟ್` ಎಸೆತ ಮತ್ತು ಡಿಸ್ಕಸ್`ಎಸೆತದ ಕ್ರೀಡಾ ಪಟು. ಅವರು ಚಾಪಲ್ ಹಿಲ್ ನಲ್ಲಿರುವ ವಿಶ್ವವದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದರು. ಮತ್ತು ಯು.ಎಸ್. ನ ಎನ್.ಸಿ.ಎಎ ನಲ್ಲಿ ,ಡಿಸ್ಕಸ್ ಎಸೆದಲ್ಲಿ ಛಾಂಪಿಯನ್ ಆಗಿದ್ದರು. ಅವರ ಅತ್ಯುತ್ತಮ ಎಸೆತ 2013 ರಲ್ಲಿ ಡಿಸ್ಕಸ್`ನಲ್ಲಿ 66.90ಮೀಟರ್`ದೂರ. 2008 ರಲ್ಲಿ ಬೀಜಿಂಗ್ ಒಲಂಪಿಕ್ಸ್`ನಲ್ಲಿ ಭಗವಹಿಸಿದ್ದರು . ಆದರೆ 22 ನೆಯವರಾಗಿ ಹೊರಬಂದರು.. 2012 ರ ಒಲಂಪಿಕ್ಸ್`ನಲ್ಲಿ 65.20 ಮೀ. ದೂರ ಎಸೆತದಿಂದ ಐದನೆಯವರಾಗಿ ಫೈನಲ್ಸಿಗೆ ಅರ್ಹತೆ ಪಡೆದರು. ಪುಣೆಯ 2013 ರ ಏಸಿಯನ್ ಕ್ರೀಡಾಕೂಟದಲ್ಲಿ 64.92 ಮೀ. ದೂರ ಎಸೆದು ಚಿನ್ನದ ಪದಕ ಗಳಿಸಿದರು ಅವರು ಗುಂಡು ಎಸೆತದಲ್ಲಿ ಒಲಂಪಿಕ್` ಗೋಲ್ಡ್` ಕ್ವೆಸ್ಟ್`ನ ಪ್ರಾಯೋಜಕತ್ವ ಹೊಂದಿ 19.62 ಮೀಟರ್` ದಾಖಲೆ ಹೊಂದಿದ್ದಾರೆ. ಅವರ ಉತ್ತಮ ಸಾದನೆ 2014ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ 63.64 ಮೀ. ಎಸೆದು ಬಂಗಾರದ ಪದಕ ಗಳಿಸಿದಾಗ ಸಿದ್ಧಿಸಿತು. 56 ವರ್ಷಗಳ ಹಿಂದೆ 1958 ರಲ್ಲಿ ಮಿಲ್ಕಾ ಸಿಂಗ್` 440 ಗಜ ದೂರ ಎಸೆದು ಬಂಗಾರದ ಪದಕ ಗೆದ್ದಿದ್ದರು. == 17ನೇ ಏಷ್ಯನ್‌ ಕ್ರೀಡಾಕೂಟ 2014ದಲ್ಲಿ == ಕರ್ನಾಟಕದ ವಿಕಾಸ್‌ ಗೌಡ ಅವರು ದಕ್ಷಿಣ ಕೊರಿಯದ ಇಂಚೆನ್‌ನಲ್ಲಿ ನಡೆಯುತ್ತಿರುವ 17ನೇ ಏಷ್ಯನ್‌ ಕ್ರೀಡಾಕೂಟ 2014 ರ ಪುರುಷರ ಡಿಸ್ಕಸ್‌ ಥ್ರೋ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದರು. ಕ್ರೀಡಾಕೂಟದ ಪ್ರಮುಖ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಡಿಸ್ಕ್‌ ಅನ್ನು ವಿಕಾಸ್‌ ೬೨.೫೮/62.58 ಮೀಟರ್‌ ದೂರ ಎಸೆದು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟರು. ೬೫.೧೧/65.11 ಮೀಟರ್‌ ದೂರ ಎಸೆದ ಇರಾನಿನ್ ಎಹ್ಸಾನ್‌ ಹದಾದಿ ಅವರು ಚಿನ್ನ ಗೆದ್ದರೆ ಕತಾರ್‌ನ ಮೊಹಮ್ಮದರ್‌ ಅಹ್ಮದ್‌ ದಹೀಬ್‌ ಅವರು ೬೧.೨೫/61.25 ಮೀಟರ್ ಎಸೆದು ಕಂಚಿನ ಪದಕ ಜಯಿಸಿದರು. == ಅವರ ವಿಶೇಷ ಕ್ರೀಡಾ ಸಾಧನೆ == == ಡಿಸ್ಕಸ್ ಎಸೆತದಲ್ಲಿ ಸಾಧನೆ == == ಪ್ರಶಸ್ತಿಗಳು == ೨೦೧೭ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ. == ಉಲ್ಲೇಖಗಳು == == ನೋಡಿ == ೧೭ ನೇ ಏಷ್ಯನ್‌ ಕ್ರೀಡಾಕೂಟ ೨೦೧೪17ನೇ ಏಷ್ಯನ್‌ ಕ್ರೀಡಾಕೂಟ 2014 ಎಂ.ಆರ್. ಪೂವಮ್ಮ ಜಿತು ರಾಯ್ ಮನೋಹರ್ ಐಚ್ ಇಂಗ್ಲಿಷ್ ತಾಣ-[[೧]] ಕುಸ್ತಿ-ಯೋಗೇಶ್ವರ್ ದತ್ತ್-[[೨]] == ಆಧಾರ == ವಿಕಾಸ್ ಗೌಡ : ಇಂಗ್ಲಿಷ್ ತಾಣ[[೩]]